ಉಚಿತ ಫಾಲುನ್ ಗೊಂಗ್ ತರಗತಿಗಳಿಗೆ ನೋಂದಾಯಿಸಿ
icon for benefit1

ದೇಹ

ಶಕ್ತಿ ಮತ್ತು ಚೈತನ್ಯವನ್ನು ವೃದ್ಧಿಸುವುದು
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು
ದೈಹಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸುವುದು

icon for benefit2

ಮನಸ್ಸು

ಸ್ಪಷ್ಟತೆ ಮತ್ತು ಏಕಾಗ್ರತೆಯ ಸಾಧನೆ
ಒತ್ತಡ ಮತ್ತು ಆತಂಕಗಳ ನಿವಾರಣೆ
ದೀರ್ಘಾವಧಿ ಮತ್ತು ಅಲ್ಪಾವಧಿ ಧಾರಣೆಗಳಲ್ಲಿ ಸುಧಾರಣೆ

icon for benefit3

ಆತ್ಮ

ಆಂತರಿಕ ಶಾಂತಿ ಮತ್ತು ಪ್ರಶಾಂತತೆಯ ಪ್ರಾಪ್ತಿ
ಧನಾತ್ಮಕ ಶಕ್ತಿಯ ವೃದ್ಧಿ
ಆಧ್ಯಾತ್ಮಿಕ ಸ್ವಾಸ್ಥ್ಯವನ್ನು ಸಮನ್ವಯಗೊಳಿಸಿ

ಫಾಲುನ್ ಗೊಂಗ್ ನ್ನು ಇಂದು ಕಲಿಯಿರಿ

ಒಂದುವರೆ ಗಂಟೆಗಳ ಉಚಿತ ಆನ್‌ಲೈನ್ ಕಾರ್ಯಾಗಾರಕ್ಕಾಗಿ ನೋಂದಾಯಿಸಿ (ಕೆಳಗಿನ ಬಟನ್ ನ್ನು ಕ್ಲಿಕ್ ಮಾಡಿ)

ಫಾಲುನ್ ಗೊಂಗ್ ಎಂದರೇನು?
(ಫಾಲುನ್ ದಾಫಾ)?

ಫಾಲುನ್ ಗೊಂಗ್ ನ್ನು ಫಾಲುನ್ ದಾಫಾ ಎಂದೂ ಕರೆಯಲಾಗುವುದು. ಇದು ಬ್ರಹ್ಮಾಂಡದ ತತ್ವಗಳಾದ ಸತ್ಯ, ಸಹಾನುಭೂತಿ ಮತ್ತು ಸಹನಶೀಲತೆಗಳ ಅಧ್ಯಯನದ ಜೊತೆಗೆ, ಕಲಿಯಲು ಸುಲಭವಾದ ಧ್ಯಾನಸಹಿತವಾದ ಸೌಮ್ಯವಾದ ಚಲನೆಗಳುಳ್ಳ ವ್ಯಾಯಾಮಗಳನ್ನೂ ಸಹ ಒಳಗೊಂಡಿದೆ. ಫಾಲುನ್ ಗೊಂಗ್ ಅನ್ನು ಇದರ ಅಭ್ಯಾಸಿಗರು ಉಚಿತವಾಗಿ ಹೇಳಿಕೊಡುತ್ತಾರೆ. ಈ ಅಭ್ಯಾಸವನ್ನು ಪ್ರಪಂಚದಾದ್ಯಂತ 80 ಕ್ಕೂ ಹೆಚ್ಚು ದೇಶಗಳಲ್ಲಿ ಎಲ್ಲಾ ವರ್ಗಗಳ ಜನರು ಮಾಡುತ್ತಿದ್ದಾರೆ.

Truthfulness · Compassion · Forbearance

ಐದು ಬಗೆಯ ಫಾಲುನ್ ದಾಫಾ ವ್ಯಾಯಾಮಗಳು

first exercise
1ಬುದ್ಧ ಸಹಸ್ರ ಕೈಗಳನ್ನು ತೋರುವ ವ್ಯಾಯಾಮ
ಈ ವ್ಯಾಯಾಮವು ಸೌಮ್ಯವಾಗಿ ಹಿಗ್ಗಿಸುವ ಚಲನೆಗಳನ್ನು ಬಳಸಿಕೊಂಡು ದೇಹದಲ್ಲಿರುವ ಎಲ್ಲಾ ಶಕ್ತಿ ಮಾರ್ಗಗಳನ್ನು ತೆರೆಯುವುದು.
second exercise
2ಫಾಲುನ್ ಸ್ಥಿರ ನಿಲುವು
ಕೈಗಳನ್ನು ಚಕ್ರಾಕಾರದಲ್ಲಿ ಹಿಡಿದು ಹೆಚ್ಚಿನ ಕಾಲ ನಿಂತುಕೊಳ್ಳುವ ನಾಲ್ಕು ಸ್ಥಿರ ನಿಲುವುಗಳನ್ನು ಒಳಗೊಂಡಿರುವ ಈ ವ್ಯಾಯಾಮವು ಒಬ್ಬರ ಶಕ್ತಿಯ ಮಟ್ಟವನ್ನು ಹೆಚ್ಚಿಸುವುದು ಮತ್ತು ವಿವೇಕವನ್ನು ಜಾಗೃತಗೊಳಿಸುವುದು.
third exercise
3ಬ್ರಹ್ಮಾಂಡದ ಕೊನೆಗಳನ್ನು ಭೇದಿಸುವುದು
ಸೌಮ್ಯವಾಗಿ ಕೈಗಳನ್ನು ಆಡಿಸುವುದರ ಮೂಲಕ ಈ ವ್ಯಾಯಾಮವು ಬ್ರಹ್ಮಾಂಡದ ಶಕ್ತಿಯನ್ನು ಬಳಸಿಕೊಂಡು ದೇಹವನ್ನು ಶುದ್ಧೀಕರಿಸುವುದು.
fourth exercise
4ಫಾಲುನ್ ದಿವ್ಯ ಪರಿಧಿ    
ಕೈಗಳನ್ನು ಇಡೀ ದೇಹಾದ್ಯಂತ ಹಿಂಭಾಗ ಮತ್ತು ಮುಂಭಾಗದಲ್ಲಿ ಸೌಮ್ಯವಾಗಿ ಆಡಿಸುವುದರ ಮೂಲಕ ಈ ವ್ಯಾಯಾಮವು ದೇಹದ ಎಲ್ಲಾ ಅಸಹಜತೆಗಳನ್ನು ಸರಿಪಡಿಸುವುದು ಮತ್ತು ಶಕ್ತಿಯನ್ನು ವ್ಯಾಪಕವಾಗಿ ಪರಿಚಲಿಸುವಂತೆ ಮಾಡುವುದು.
fifth exercise
5ದೈವಿಕ ಶಕ್ತಿಗಳನ್ನು ಪುನರ್ಬಲನಗೊಳಿಸುವುದು
ಆಳವಾದ ಪ್ರಶಾಂತತೆಯನ್ನು ಪ್ರವೇಶಿಸಿ ದೇಹ ಮತ್ತು ಮನಸ್ಸನ್ನು ಅನಾವರಣಗೊಳಿಸುವ ಒಂದು ಧ್ಯಾನದ ಮೂಲಕ ಒಬ್ಬರ ದೈವಿಕ ಶಕ್ತಿಗಳನ್ನು ಮತ್ತು ಶಕ್ತಿಸಾಮರ್ಥ್ಯವನ್ನು ಬಲಪಡಿಸುವುದು.

ಫಾಲುನ್ ಗೊಂಗ್ ಅಭ್ಯಾಸಿಗರ
ಕೆಲವು ಅನುಭವಗಳು

ದೈನಂದಿನ ಬದುಕಿನಿಂದ ಆಯಾಸಗೊಂಡಿರುವ 57 ವರ್ಷ ವಯಸ್ಸಾಗಿರುವ ನನಗೆ ಫಾಲುನ್ ದಾಫಾದ ಪರಿಚಯವಾಯಿತು. 5 ವರ್ಷಗಳ ನಂತರ ಈಗ ನಾನು ಚಿಕ್ಕವನಂತೆ ಕಾಣುತ್ತಿದ್ದೇನೆ. ನನ್ನ ಸುಕ್ಕುಗಳು ಬಹುತೇಕವಾಗಿ ಕಣ್ಮರೆಯಾಗಿವೆ ಮತ್ತು ನನ್ನ ಶಕ್ತಿಯು ನಿರಂತರವಾಗಿ ವೃದ್ಧಿಸುತ್ತಿದೆ. ನಾನೀಗ ಉತ್ತಮನಾಗಿ, ಹೆಚ್ಚು ಶಕ್ತಿಶಾಲಿಯಾಗಿ ಮತ್ತು ಹೆಚ್ಚು ಸ್ಪಷ್ಟ ಮನಸ್ಸಿನವನಾಗಿರುವಂತೆ ನನಗೆ ಅನಿಸಿದೆ.

- ಕೋನಿ ಚಿಪ್ಕರ್, ಟೊರೊಂಟೊ

ಸಂಗೀತಗಾರನಾಗಿರುವ ನನ್ನ ಸುತ್ತಲಿನ ವಾತಾವರಣವು ಉತ್ತಮವಾಗಿರಲಿಲ್ಲ. ಆದರೆ ನಾನು ಫಾಲುನ್ ಗೊಂಗ್ ಅಭ್ಯಾಸವನ್ನು ಆರಂಭಿಸಿದ ಒಂದು ತಿಂಗಳಲ್ಲಿಯೇ, ಮಧ್ಯ ಮತ್ತು ಮಾದಕ ವಸ್ತುಗಳಂತಹ ಎಲ್ಲಾ ಅಪಾಯಕಾರಿ ವಿಷಯಗಳಿಂದ ದೂರ ಸರಿಯಲು ಸಾಧ್ಯವಾಗಿದೆ. ಹಾಗೂ ಜ್ಚುಆನ್ ಫಾಲುನ್ ಪುಸ್ತಕದ ಅಧ್ಯಯನವು ಮಲೀನ ವಾತಾವರಣದಿಂದ ತ್ವರಿತವಾಗಿ ಹೊರಬರಲು ನನಗೆ ಸಾಧ್ಯವಾಗಿಸಿದೆ.

- ಸ್ಟರ್ಲಿಂಗ್ ಕ್ಯಾಂಪ್ಬೆಲ್, ನ್ಯೂಯಾರ್ಕ್

ಫಾಲುನ್ ಗೊಂಗ್ ನನಗೆ ಒಬ್ಬ ಉತ್ತಮ ಮಗನಾಗಿರಲು, ಪತಿಯಾಗಿರಲು ಹಾಗೂ ಸ್ನೇಹಿತನಾಗಿರಲು ಜ್ಞಾನ ಮತ್ತು ವಿವೇಕವನ್ನು ನೀಡಿದೆ. ಕಷ್ಟಕರವಾದ ಪರಿಸ್ಥಿತಿಯಲ್ಲಿಯೂ ಕೂಡ ಸರಿಯಾದ ಆಯ್ಕೆಗಳನ್ನು ಮಾಡಲು ಇದು ನನಗೆ ಅವಕಾಶ ನೀಡಿದೆ.

- - ನಿಕ್ ಜಾನಿಕಿ, ಫೀನಿಕ್ಸ್

ಫಾಲುನ್ ಗೊಂಗ್
ವಿಶ್ವಾದ್ಯಂತ

alternative
ಇಸ್ರೇಲ್‌ನಲ್ಲಿನ ಯುವ ಅಭ್ಯಾಸಿಗಳು
alternative
ತೈಪೆಯಲ್ಲಿ ವ್ಯಾಯಾಮಗಳ ಗುಂಪು ಅಭ್ಯಾಸ
alternative
ಕೊರಿಯಾದಲ್ಲಿ ಫಾಲುನ್ ಗೊಂಗ್
alternative
ನ್ಯೂಯಾರ್ಕ್ ನ 42ನೇ ಬೀದಿ
alternative
ರಷ್ಯಾದಲ್ಲಿ ಫಾಲುನ್ ಗೊಂಗ್
alternative
ಯು.ಎಸ್. ಕ್ಯಾಪಿಟಲ್‌ನಲ್ಲಿ ಫಾಲುನ್ ಗೊಂಗ್
alternative
ಶಾಂತ ಮನಸ್ಸು ಚಿಕ್ಕ ವಯಸ್ಸಿನಲ್ಲಿಯೇ ಆರಂಭವಾಗುವುದು
alternative
ಪ್ಯಾರಿಸ್ ನ ರಾತ್ರಿ
alternative
ಒಂದು ಗಂಭೀರ ಕ್ಷಣ
alternative
ಒಂದು ಒಳ್ಳೆಯ ಉದ್ದೇಶಕ್ಕಾಗಿ ತಂದೆ ಮತ್ತು ಮಗ
alternative
ಭಾರತದಲ್ಲಿ ಶಾಲಾ ವಿದ್ಯಾರ್ಥಿಗಳು
alternative
ನಿಜವಾದ ಸಂತೋಷವು ಮರೆಮಾಚುವುದಿಲ್ಲ!
alternative
ಪ್ರಶಾಂತತೆಯ ಶಕ್ತಿ
alternative
ವ್ಯಾಯಾಮವನ್ನು ಕಲಿಯಲು ವಯಸ್ಸಿನ ಯಾವುದೇ ಮಿತಿಯಿಲ್ಲ
alternative
ದೈಹಿಕ ಶಕ್ತಿಯನ್ನುಮತ್ತು ಮಾನಸಿಕ ಚುರುಕುತನವನ್ನು ವೃದ್ಧಿಸುವುದು
alternative
1990 ರ ದಶಕದಲ್ಲಿ ಚೀನಾದ ಚೆಂಗ್ಡುದಲ್ಲಿ ಮುಂಜಾನೆಯ ಗುಂಪು ವ್ಯಾಯಾಮ
alternative
1990 ರ ದಶಕದಲ್ಲಿ ಚೀನಾದ ಗ್ವಾಂಗ್ ಜೋದಲ್ಲಿ ಮುಂಜಾನೆಯ ಗುಂಪು ವ್ಯಾಯಾಮ

ಫಾಲುನ್ ಗೊಂಗ್ ಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

1ಫಾಲುನ್ ಗೊಂಗ್ ನ ಬೋಧನೆಗಳು ಮತ್ತು ನಂಬಿಕೆಗಳು ಯಾವುವು?
ಫಾಲುನ್ ಗೊಂಗ್‌ನ ಮುಖ್ಯ ತಿರುಳೆಂದರೆ ಸತ್ಯ, ಸಹಾನುಭೂತಿ ಮತ್ತು ಸಹನಶೀಲತೆ (ಅಥವಾ ಚೀನೀ ಭಾಷೆಯಲ್ಲಿ ಜ್ಹನ್, ಷನ್ ಮತ್ತು ರ್ಹನ್)ಗಳ ತತ್ವಗಳು. ಇವು ಬ್ರಹ್ಮಾಂಡದ ಅತ್ಯಂತ ಮೂಲಭೂತ ಗುಣಗಳೆಂದು ಫಾಲುನ್ ಗೊಂಗ್ ಬೋಧಿಸುವುದು. ಅಭ್ಯಾಸಿಗರು ತಮ್ಮ ದೈನಂದಿನ ಜೀವನದಲ್ಲಿ ಧ್ಯಾನ, ಛೀಗೊಂಗ್ ನಂತಹ ವ್ಯಾಯಾಮಗಳನ್ನು ಮಾಡುವುದು ಮತ್ತು ನೈತಿಕ ತತ್ವಗಳ ಅಧ್ಯಯನದ ಮೂಲಕ ಈ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಫಾಲುನ್ ಗೊಂಗ್‌ನಂತಹ ಛೀಗೊಂಗ್ ಅಭ್ಯಾಸಗಳು ಸಹಸ್ರಮಾನದಲ್ಲಿ ಏಷ್ಯಾದ್ಯಂತ ಅಸ್ತಿತ್ವದಲ್ಲಿದ್ದ ಸಾಧನಾಭ್ಯಾಸದ ವಿಶಾಲ ಸಂಪ್ರದಾಯದ ಒಂದು ಭಾಗವಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಫಾಲುನ್ ಗೊಂಗ್ ನ್ನು ಅದರ ವೇದಾಂತ ಮತ್ತು ನೈತಿಕ ಬೋಧನೆಗಳ ಆಧಾರದ ಮೇಲೆ ಬಹಳ ಸಲ, ಒಂದು ಧರ್ಮವೆಂದು ವರ್ಗೀಕರಿಸಲಾಗುವುದು. ಆದಾಗ್ಯೂ, ಫಾಲುನ್ ಗೊಂಗ್ ಅಭ್ಯಾಸವು ಸಾಂಪ್ರದಾಯಿಕ ಅರ್ಥದಲ್ಲಿ ಧರ್ಮಗಳಿಗಿಂದ ಹೆಚ್ಚು ಭಿನ್ನವಾಗಿದೆ, ಅದು ಪೂಜೆ, ಆಚರಣೆಗಳು ಅಥವಾ ಹಣದ ಸಂಗ್ರಹವನ್ನು ಒಳಗೊಂಡಿರುವುದಿಲ್ಲ. ಜನರ ಹಿನ್ನೆಲೆ ಮತ್ತು ಏನನ್ನೂ ಲೆಕ್ಕಿಸದೆ ಎಲ್ಲರಿಗೂ ಕೂಡ ಈ ಅಭ್ಯಾಸ ಮಾಡಲು ಅವಕಾಶವಿರುವುದು
ಫಾಲುನ್ ಗೊಂಗ್ ಎಲ್ಲರಿಗೂ ಮುಕ್ತವಾಗಿದೆ. ಇದು ಚೀನಾದಲ್ಲಿ ಹುಟ್ಟಿಕೊಂಡಿದ್ದರೂ, ಇದನ್ನು ಪ್ರಪಂಚದಾದ್ಯಂತ ಅನೇಕರು ಅಭ್ಯಾಸ ಮಾಡುತ್ತಿದ್ದಾರೆ. ಇಂದು, ವಿವಿಧ ಜನಾಂಗದ, ಸಾಂಸ್ಕೃತಿಕ ಮತ್ತು ವಿವಿಧ ವರ್ಗದ ಹಿನ್ನೆಲೆಯುಳ್ಳ ಮತ್ತು ಸಮಾಜದ ಅನೇಕ ಬಗೆಯ ಕೋಟ್ಯಾನುಕೋಟಿ ಜನರು ಫಾಲುನ್ ಗೊಂಗ್ ನ್ನು ಅಭ್ಯಾಸ ಮಾಡುತ್ತಿದ್ದಾರೆ. ಜಗತ್ತಿನಾದ್ಯಂತ 80ಕ್ಕೂಅಧಿಕ ದೇಶಗಳಲ್ಲಿ ಅಭ್ಯಾಸಿಗರು ಸ್ವಯಂ ಪ್ರೇರಣೆಯಿಂದ ಇದನ್ನು ಕಲಿಸುತ್ತಿದ್ದಾರೆ. ಫಾಲುನ್ ಗೊಂಗ್ ಪುಸ್ತಕಗಳನ್ನು 40ಕ್ಕೂ ಅಧಿಕ ಭಾಷೆಗಳಿಗೆ ಅನುವಾದಿಸಲಾಗಿದೆ ಮತ್ತು ಇವೆಲ್ಲವೂ ಆನ್‌ಲೈನ್‌ನಲ್ಲಿ ಉಚಿತವಾಗಿ ಲಭ್ಯವಿದೆ.
ಚೀನೀ ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರಿ ಮಾಧ್ಯಮವು ಚೀನಾದಲ್ಲಿ 1999 ರ ಆರಂಭದಲ್ಲಿ 7 ರಿಂದ 10 ಕೋಟಿ ಜನರು ಫಾಲುನ್ ಗೊಂಗ್ ನ್ನು ಅಭ್ಯಾಸ ಮಾಡುತ್ತಿರುವರೆಂದು ಅಂದಾಜಿಸಿದ್ದರು. ಇದು ಆ ಸಮಯದಲ್ಲಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆಧ್ಯಾತ್ಮಿಕ ಬೋಧನೆಯಾಗಿತ್ತು. ಇಂದು, ಫಾಲುನ್ ಗೊಂಗ್ ನ್ನು ಅಭ್ಯಾಸ ಮಾಡುವ ಜನರು ಪ್ರಪಂಚದಾದ್ಯಂತ 80 ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದರೂ, ಅಭ್ಯಾಸವು ಸದಸ್ಯತ್ವದ ಪರಿಕಲ್ಪನೆಯನ್ನು ಹೊಂದಿಲ್ಲದಿರುವುದರಿಂದ ನಿಖರವಾದ ಅಂಕಿ ಅಂಶಗಳನ್ನು ನೀಡುವುದು ಕಷ್ಟಕರವಾಗಿರುವುದು.
ಚೀನಾದ ಚಾಂಗ್‌ಚುನ್‌ನ ಶ್ರೀ ಲೀ ಹೊಂಗ್ ಜ್ಹ್ರ್ ರವರು ಫಾಲುನ್ ಗೊಂಗ್ ನ್ನು ಮೊಟ್ಟಮೊದಲಿಗೆ ಸಾರ್ವಜನಿಕವಾಗಿ ಅಲ್ಲಿ ಪರಿಚಯಿಸಿದರು. ಈಗ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ವಾಸಿಸುತ್ತಿರುವ ಮಾಸ್ಟರ್ ಲೀ ಹೊಂಗ್ ಜ್ಹ್ರ್ ರವರು ಐದು ಬಾರಿ ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ನಾಮನಿರ್ದೇಶಿತರಾಗಿದ್ದಾರೆ ಮತ್ತು ಯುರೋಪ್ ಪಾರ್ಲಿಮೆಂಟ್‌ನಿಂದ ಚಿಂತನೆಯ ಸ್ವಾತಂತ್ರ್ಯಕ್ಕಾಗಿ ಸಖರೋವ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಮಾಸ್ಟರ್ ರವರು ಅಮೇರಿಕ ಸಂಯುಕ್ತ ಸಂಸ್ಥಾನದ ಫ್ರೀಡಂ ಹೌಸ್‌ನ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಪ್ರಶಸ್ತಿಯನ್ನು ಸಹ ಗಳಿಸಿದ್ದಾರೆ.
ಫಾಲುನ್ ಗೊಂಗ್ ಅಭ್ಯಾಸವು1990 ರ ದಶಕದಲ್ಲಿ ಚೀನಾದ್ಯಂತ ವ್ಯಾಪಕವಾಗಿ ಜನಪ್ರಿಯಗೊಂಡಿತ್ತು ಮತ್ತು ಆ ಸಮಯದಲ್ಲಿ ಚೀನಾ ಸರ್ಕಾರದಿಂದ ಹೆಚ್ಚಿನ ಪ್ರಶಂಶೆಗೂ ಒಳಪಟ್ಟು ಸರ್ಕಾರದಿಂದಲೇ ಪ್ರಶಸ್ತಿಗಳನ್ನೂ ನೀಡಲಾಗಿತ್ತು. ಆದಾಗ್ಯೂ, ಚೀನೀ ಕಮ್ಯುನಿಸ್ಟ್ ಪಕ್ಷದ(ಸಿಸಿಪಿ) ಕೆಲವು ಉನ್ನತ ನಾಯಕರು, ಫಾಲುನ್ ಗೊಂಗ್ ನ ಹೆಚ್ಚುತ್ತಿರುವ ಜನಪ್ರಿಯತೆ, ನೈತಿಕತೆಯ ಜೀವನ ಮತ್ತು ಚೀನೀ ಸಾಂಪ್ರದಾಯಿಕ ಸಂಸ್ಕೃತಿಯ ಮೇಲೆ ಫಾಲುನ್ ಗೊಂಗ್ ನ ಪ್ರಾಧಾನ್ಯತೆಯು, ನಿಯಂತ್ರಣ ಮತ್ತು ಭಯವನ್ನೇ ಮೂಲವಾಗಿಸಿಕೊಂಡು ಆಳ್ವಿಕೆ ಮಾಡುವ ಕಮ್ಯುನಿಸ್ಟ್ ನಾಸ್ತಿಕತ್ವದ ಆಡಳಿತಕ್ಕೆ ಇದು ಬೆದರಿಕೆಯಾಗಿರುವುದೆಂದು ಭಾವಿಸಿ 1999 ರಲ್ಲಿ ಈ ಅಭ್ಯಾಸದ ವಿರುದ್ಧ ಹಿಂಸಾತ್ಮಕ ಅಭಿಯಾನವನ್ನೇ ಆರಂಭಿಸಿದರು.

ಚೀನಾದ ಉನ್ನತ ನಾಯಕ ಜಿಯಾಂಗ್ ಝಮಿನ್ ರವರು ಆ ಸಮಯದಲ್ಲಿ ತಮಗೊಸ್ಕರ ಸ್ವತ್ತನ್ನು ಕಟ್ಟಿಕೊಳ್ಳುವ ಅವರ ಪ್ರಯತ್ನಗಳಿಗೆ ಫಾಲುನ್ ಗೊಂಗ್ ಅಡ್ಡಿಯಾಗುವುದೆಂದು ಭಯಗೊಂಡು ಅದರ ಜನಪ್ರಿಯತೆಯನ್ನು ವೈಯಕ್ತಿಕವಾಗಿ ನಿಗ್ರಹಿಸಿರುವರೆಂದು ಕೂಡ ಸಿಸಿಪಿಯೊಳಗಿನ ಅನೇಕರು ತಿಳಿಸಿದ್ದಾರೆ.

ಜಗತ್ತಿನಾದ್ಯಂತ ಸರ್ಕಾರಗಳು ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಸೇರಿದಂತೆ ಮಾನವ ಹಕ್ಕುಗಳ ಗುಂಪುಗಳು ಮತ್ತು ಮಾನವ ಹಕ್ಕುಗಳ ಸಂಸ್ಥೆಯು ಫಾಲುನ್ ಗೊಂಗ್ ಮೇಲೆ ಹೇರಿರುವ ನಿಷೇಧವನ್ನು ತೆಗೆದುಹಾಕಲು ಸಿಸಿಪಿಗೆ ಕರೆ ನೀಡಿದೆ. ಒಂದು ಶಾಂತಿಯುತ ನಿಷ್ಟೆಯ ಮೇಲೆ ನಂಬುಗೆಯನ್ನಿರುಸಿರುವವರ ಮೇಲೆ ನಿಷೇಧ ಹೇರಿರುವುದನ್ನು, ಒಂದು ಸಂಶಯ ಪಿಶಾಚಿಯ ಆಡಳಿತದಿಂದ ಮಾಡಲಾಗಿರುವ ಒಂದು ಅಕ್ರಮ ದಾಳಿಎಂದು ಇವರು ನಿಂದಿಸಿದ್ದಾರೆ.
'ಫಾಲುನ್ ದಾಫಾ' ಮತ್ತು 'ಫಾಲುನ್ ಗೊಂಗ್' ಎರಡೂ ಒಂದೇ ಅಭ್ಯಾಸವಾಗಿರುವುದು. 'ಫಾಲುನ್ ದಾಫಾ' ಎಂಬುದೊಂದು ಔಪಚಾರಿಕ ಹೆಸರು, ಆದರೆ 'ಫಾಲುನ್ ಗೊಂಗ್' ಎಂಬುದು ಚೀನಾದಲ್ಲಿ ಹೆಚ್ಚುಜನಪ್ರಿಯವಾಗಿರುವ ಆಡುಮಾತಿನ ಒಂದು ಪದವಾಗಿದೆ.

ಫಾಲುನ್ ದಾಫಾ' ದ ಇಂಗ್ಲೀಷ್ ಅನುವಾದವು 'ಲಾ ವ್ಹೀಲ್ ಆಫ್ ದಿ ಗ್ರೇಟ್ ಲಾ' ಎಂದಾಗುವುದು. ಕನ್ನಡದಲ್ಲಿ ಇದು 'ಶ್ರೇಷ್ಟ ಮಾರ್ಗದ ಧರ್ಮ ಚಕ್ರ' ಎಂದು ಅರ್ಥೈಸುವುದು.